ಮನೆಯೆಂದರೆ ಅದು ಹೀಗಿರಬೇಕು:
ಚಿಕ್ಕದಾಗಿದ್ದರೂ ಅದು ಚೊಕ್ಕವಿರಬೇಕು ,
ಮಕ್ಕಳ ಸ್ವರವೂ ಬೇಕು ಹಕ್ಕಿಗಳ ಇಂಚರದಂತೆ,
ಹಿರಿಯರ ಹಿತನುಡಿಗಳ ಸಾರ ಇಲ್ಲಿರಬೇಕು,
ಮನಸ್ಸಿರಬೇಕು ಗರಿಗೆದರಿದ ನವಿಲಿನಂತೆ.
ಮನೆಯೆಂದರೆ ಅದು ಹೀಗಿರಬೇಕು:
ಸಹಕಾರ ಮನೋಭಾವನೆಯು ಇಲ್ಲಿರ ಬೇಕು
ಪ್ರೀತಿಯ ಆಕಾರ ಕೊಡಬೇಕು ಎಲ್ಲರಿಗೂ ಮಕ್ಕಳಂತೆ,
ಎಂದಿಗೂ ಮನೆಮಂದಿಯ ವ್ಯವಹಾರದಲ್ಲಿ ಪಾಲ್ಗೊಳ್ಳಬೇಕು,
ನಮ್ಮ ವಿಹಾರವಿರಬೇಕು ಕ್ಷೇತ್ರದರ್ಶನದಂತೆ,
ಮನೆಯೆಂದರೆ ಅದು ಹೀಗಿರಬೇಕು:
ಇರಬಾರದು ಇಲ್ಲಿ ಮನಸ್ಸಿಗೆ ಬೇಸರ,
ಇದುವೇ ಸುಖಃ ದುಖಃದ ಸಮ್ಮಿಲನದ ಸಾಗರ,
ಸುಖಃ ಶಾಂತಿಗೆ ಮನೆಯೇ ಆಧಾರ,
ಮನೆಯೆಂದರೆ ಅದು ಹೀಗಿರಬೇಕು:
'HOME SWEET HOME'
-- ಪುಷ್ಪತಾರ ಡಿ ಉಚಿಲ
ಮಂಗಳೂರು
(ಜನ ಮನ ಕಾರ್ಯಕ್ರಮ ದಲ್ಲಿ ಪ್ರಸಾರವಾಗಿ ಬಹುಮಾನ ಗೆದ್ದ ಕವನ )
Friday, September 25, 2009
ಮಕ್ಕಳು
ಇಂದು ಇವರು ಮಕ್ಕಳು
ಮುಂದೆ ಇವರೆ ಯುವಕರು
ಬಾಳನರಿತು ಬದುಕುವ ಮಾನವೀಯರು.
ಬೀಜ ಬಿತ್ತಿ ಗಿಡವನೆಟ್ಟು
ನೀರನೆರದು ಕಾಲಕಾಲಕೆ
ಸಾಕಬೇಕು ಇವರನು ಹೆತ್ತವರು ಎಲ್ಲರೂ .
ತುಂಬಿ ಹರಿವ ನದಿಯಲಿ
ದೋಣಿ ದಡವ ಸೇರದು ಸುಳಿಯ ಸೆಳೆತಕೆ
ಇದರ ತಿರುಳನರಿತು ಸಾಗಬೇಕು
ಮಕ್ಕಳು ಮುಂದಕೆ.
ದಾರಿ ಸುಗಮ ಗೊಳಿಸಬೇಕು ಕಾಲಕಾಲಕೆ
ಹೆತ್ತವರ ರಕ್ಷಕರು ಇವರು ಮುಂದಕೆ.
ಮನೆಯ ಬೆಳಗಿಸಿ
ನಾಡಿನುನ್ನತಿಯ ಸೃಷ್ಟಿಸಿ
ಕನಸ ಹುಟ್ಟಿಸಿ
ನನಸಾಗಿಸಿ.
ಆ ಶೃಷ್ಟಿಕರ್ತ ದೇವನಾ ಸದಾ ನೆನಪಿಸಿ
ನಮ್ಮೆಲ್ಲರ ಶುಭ ಹಾರೈಕೆಯು
ಮಕ್ಕಳಿರೋ ಇದೋ ನಿಮಗಿದೋ !!!
-- ಪುಷ್ಪತಾರ ಡಿ ಉಚಿಲ
ಮಂಗಳೂರು
(ಜನ ಮನ ಕಾರ್ಯಕ್ರಮ ದಲ್ಲಿ ಪ್ರಸಾರ ವಾಗಿ ಬಹುಮಾನ ಗಳಿಸಿದ ಕವನ )
ಮುಂದೆ ಇವರೆ ಯುವಕರು
ಬಾಳನರಿತು ಬದುಕುವ ಮಾನವೀಯರು.
ಬೀಜ ಬಿತ್ತಿ ಗಿಡವನೆಟ್ಟು
ನೀರನೆರದು ಕಾಲಕಾಲಕೆ
ಸಾಕಬೇಕು ಇವರನು ಹೆತ್ತವರು ಎಲ್ಲರೂ .
ತುಂಬಿ ಹರಿವ ನದಿಯಲಿ
ದೋಣಿ ದಡವ ಸೇರದು ಸುಳಿಯ ಸೆಳೆತಕೆ
ಇದರ ತಿರುಳನರಿತು ಸಾಗಬೇಕು
ಮಕ್ಕಳು ಮುಂದಕೆ.
ದಾರಿ ಸುಗಮ ಗೊಳಿಸಬೇಕು ಕಾಲಕಾಲಕೆ
ಹೆತ್ತವರ ರಕ್ಷಕರು ಇವರು ಮುಂದಕೆ.
ಮನೆಯ ಬೆಳಗಿಸಿ
ನಾಡಿನುನ್ನತಿಯ ಸೃಷ್ಟಿಸಿ
ಕನಸ ಹುಟ್ಟಿಸಿ
ನನಸಾಗಿಸಿ.
ಆ ಶೃಷ್ಟಿಕರ್ತ ದೇವನಾ ಸದಾ ನೆನಪಿಸಿ
ನಮ್ಮೆಲ್ಲರ ಶುಭ ಹಾರೈಕೆಯು
ಮಕ್ಕಳಿರೋ ಇದೋ ನಿಮಗಿದೋ !!!
-- ಪುಷ್ಪತಾರ ಡಿ ಉಚಿಲ
ಮಂಗಳೂರು
(ಜನ ಮನ ಕಾರ್ಯಕ್ರಮ ದಲ್ಲಿ ಪ್ರಸಾರ ವಾಗಿ ಬಹುಮಾನ ಗಳಿಸಿದ ಕವನ )
Wednesday, August 5, 2009
ಗಡಿಯಾರ
ಗೋಡೆಯಲ್ಲಿ ಗೋಚರಿಸುವ ಗಡಿಯಾರ
ಚಲಿಸುವುದದು ಲೆಕ್ಕ ಪ್ರಕಾರ
ಯಾರೇನು ಮಾಡಿದರೂ ನಕಾರ
ಇದಕ್ಕೆ ತರತರಹದ ಆಕಾರ
ಲೆಕ್ಕ ತಪ್ಪಿದರೆ ಕೆಲಸವೆಲ್ಲ ವಿಕಾರ
ನಿಂತಲ್ಲಿ ಕೂತಲ್ಲಿ ಎಲ್ಲರ ಕೈಯಲ್ಲಿ ಕಾಣುವುದು ಕೈಗಡಿಯಾರ
ಆದರೂ ಎಲ್ಲರ ಮಾತಲ್ಲೂ ಕೇಳಿಬರುವುದು ಟೈಮ್ ಇಲ್ಲ ಎನ್ನುವ ಅಧಿಕಾರ.
ಇದರ ಸೂತ್ರವನ್ನು ಅನುಸರಿಸುವುದು ತುಸು ಕಷ್ಟಕರ
ಚಲನೆ ನಿಂತು ಹೋದರೆ ಇದಕ್ಕಿರುವುದಿಲ್ಲ ಮತ್ತೆ ಸಾರ
ಗಡಿಯಾರದ ತೆರದಿ ಕೆಲಸವಾ ಮಾಡಿರೈ, ಆಗಲೇ ದೇಶದ ಉದ್ಧಾರ ,
ಅರಿತವರ್ಯಾರು ಈ ಗಡಿಯಾರದ ಗುಣಾಕಾರ?
ಕೆಲಸವ ನಿಲ್ಲಿಸಿ ಹೂದದಿರೈ ದಿಕ್ಕಾರ
ಗಡಿಯಾರದ ಚಲನೆಗೆ ಬೇಕು ಎಲ್ಲರ ಸಹಕಾರ
ಮಾದುವುಡದು ಸರ್ವರ ವ್ಯವಹಾರ
ಎಚ್ಚರಿಕೆಯ ಗಂಟೆಯದು -- ಎಲ್ಲರ ನಿದ್ರೆಗೂ ಎಚ್ಚರ.
ಪುಷ್ಪತಾರಾ ಡಿ. ಉಚ್ಚಿಲ,
ಮಂಗಳೂರು.
ಚಲಿಸುವುದದು ಲೆಕ್ಕ ಪ್ರಕಾರ
ಯಾರೇನು ಮಾಡಿದರೂ ನಕಾರ
ಇದಕ್ಕೆ ತರತರಹದ ಆಕಾರ
ಲೆಕ್ಕ ತಪ್ಪಿದರೆ ಕೆಲಸವೆಲ್ಲ ವಿಕಾರ
ನಿಂತಲ್ಲಿ ಕೂತಲ್ಲಿ ಎಲ್ಲರ ಕೈಯಲ್ಲಿ ಕಾಣುವುದು ಕೈಗಡಿಯಾರ
ಆದರೂ ಎಲ್ಲರ ಮಾತಲ್ಲೂ ಕೇಳಿಬರುವುದು ಟೈಮ್ ಇಲ್ಲ ಎನ್ನುವ ಅಧಿಕಾರ.
ಇದರ ಸೂತ್ರವನ್ನು ಅನುಸರಿಸುವುದು ತುಸು ಕಷ್ಟಕರ
ಚಲನೆ ನಿಂತು ಹೋದರೆ ಇದಕ್ಕಿರುವುದಿಲ್ಲ ಮತ್ತೆ ಸಾರ
ಗಡಿಯಾರದ ತೆರದಿ ಕೆಲಸವಾ ಮಾಡಿರೈ, ಆಗಲೇ ದೇಶದ ಉದ್ಧಾರ ,
ಅರಿತವರ್ಯಾರು ಈ ಗಡಿಯಾರದ ಗುಣಾಕಾರ?
ಕೆಲಸವ ನಿಲ್ಲಿಸಿ ಹೂದದಿರೈ ದಿಕ್ಕಾರ
ಗಡಿಯಾರದ ಚಲನೆಗೆ ಬೇಕು ಎಲ್ಲರ ಸಹಕಾರ
ಮಾದುವುಡದು ಸರ್ವರ ವ್ಯವಹಾರ
ಎಚ್ಚರಿಕೆಯ ಗಂಟೆಯದು -- ಎಲ್ಲರ ನಿದ್ರೆಗೂ ಎಚ್ಚರ.
ಪುಷ್ಪತಾರಾ ಡಿ. ಉಚ್ಚಿಲ,
ಮಂಗಳೂರು.
ಆಸೆ
ಆಸೆ
ಅತಿ ಆಸೆ ಗತಿಕೇಡು ಎಂಬುದನ್ನು ತಿಳಿದಿರು,
ಮಿತಿಯ ಗೆರೆಯನು ದಾಟಲು ಹೋಗದಿರು.
ಇತಿಹಾಸವದು ತಿಳಿಸುವುದು ಆಸೆಯಾ ಕತೆಯನ್ನು,
ಆಸೆಯದು ಕಬಳಿಸಿತು ಭೂಮಿಯಾ ಭಾಗವನ್ನು,
ಕಾಳಗದಿ ಕಂಡಿತದು ಸೋಲನ್ನು ಗೆಲುವನ್ನು.
ಕಾಣಲು ಬಯಸದಿರು ನೀ ಸಾವನ್ನು ನೋವನ್ನು,
ಸಮಾನತೆಯ ಸಾಧಿಸು ನೀ ಆಸೆಯನು ಬಿಟ್ಟು ಇನ್ನು!
ಪುಷ್ಪತಾರ ಡಿ ಉಚ್ಚಿಲ್
ಮಂಗಳೂರು
Thursday, March 5, 2009
ಸಮಯ (೦೫/೦೩/೨೦೦೯)
ಸೂರ್ಯನ ಬೆನ್ನ ಹತ್ತಿ ಓಡುವುದು ಸಮಯ,
ಗಡಿಯಾರದ ಸಂಖ್ಯೆಯನ್ನು ದಾಟುವುದು ಸಮಯ
ಬಿಸಿಲನ್ನು ಓಡಿಸುವುದು ಸಮಯ.
ಸಮಯವ ಹಿಡಿದಿಡಲು ಅದು ನಿಲ್ಲುವುದು ಉಂಟೇ?
ಸಮಯವ ಉಪಯೋಗಿಸು ಒಳಿತಿನ ಕೆಲಸಕ್ಕೆ ಮತ್ತೆ!
ಸಮಯದ ಬೆಲೆಯರಿತು ನಡೆಯುವುದು ಯುಕ್ತಿ
ಸಮಯವ ಕಳೆದರೆ ವ್ಯರ್ಥವಾಗುವುದು ಬುಧಿಶಕ್ತಿ
ಒಳಿತು ಕೆಡುಕುಗಳ ಯೋಚನೆಯ ಬಳಕೆಯದು,
ಸಮಯ ಕಳೆದಂತೆ ಒಳಿತು ಬೆಳಕಾಗುವುದು,
ಕೆಡುಕ ಹುಡುಕಿದಂತೆ ಬಾಳು ಕಪ್ಪಾಗುವುದು,
ಸಮಯವ ಅರಿತು ನಡೆದರೆ ದಾರಿ ತೋರುವುದು.
ಭೂಮಿಯ ಚಲನೆಯನು ನೆಲ್ಲಿಸಲಸಾಧ್ಯ,
ಮನುಷ್ಯನ ಭವಿಷ್ಯವನು ನಿರ್ಧರಿಸಲಸಾಧ್ಯ,
ಜೀವನವ ಅನುಭವಿಸು ಸಮಯವದು ಲಭ್ಯ,
ನೀ ಸೋಮಾರಿಯಾದರೆ ಸಕಲವೂ ಅಲಭ್ಯ.
ಈ ಎಲ್ಲಾ ಸಾಧ್ಯ ಅಸಾಧ್ಯಗಳ ಮಧ್ಯೆ ನೀ
ಲಭ್ಯವಿರುವ ಸಮಯದ ಇತಿಮಿತಿ ಅರಿತು
ಸಭ್ಯತನ ತೋರಿ ಎಲ್ಲವನ್ನೂ ಗೆಲ್ಲು.
-- ಪುಷ್ಪಥಾರಾ ಉಚಿಲ್
ಗಡಿಯಾರದ ಸಂಖ್ಯೆಯನ್ನು ದಾಟುವುದು ಸಮಯ
ಬಿಸಿಲನ್ನು ಓಡಿಸುವುದು ಸಮಯ.
ಸಮಯವ ಹಿಡಿದಿಡಲು ಅದು ನಿಲ್ಲುವುದು ಉಂಟೇ?
ಸಮಯವ ಉಪಯೋಗಿಸು ಒಳಿತಿನ ಕೆಲಸಕ್ಕೆ ಮತ್ತೆ!
ಸಮಯದ ಬೆಲೆಯರಿತು ನಡೆಯುವುದು ಯುಕ್ತಿ
ಸಮಯವ ಕಳೆದರೆ ವ್ಯರ್ಥವಾಗುವುದು ಬುಧಿಶಕ್ತಿ
ಒಳಿತು ಕೆಡುಕುಗಳ ಯೋಚನೆಯ ಬಳಕೆಯದು,
ಸಮಯ ಕಳೆದಂತೆ ಒಳಿತು ಬೆಳಕಾಗುವುದು,
ಕೆಡುಕ ಹುಡುಕಿದಂತೆ ಬಾಳು ಕಪ್ಪಾಗುವುದು,
ಸಮಯವ ಅರಿತು ನಡೆದರೆ ದಾರಿ ತೋರುವುದು.
ಭೂಮಿಯ ಚಲನೆಯನು ನೆಲ್ಲಿಸಲಸಾಧ್ಯ,
ಮನುಷ್ಯನ ಭವಿಷ್ಯವನು ನಿರ್ಧರಿಸಲಸಾಧ್ಯ,
ಜೀವನವ ಅನುಭವಿಸು ಸಮಯವದು ಲಭ್ಯ,
ನೀ ಸೋಮಾರಿಯಾದರೆ ಸಕಲವೂ ಅಲಭ್ಯ.
ಈ ಎಲ್ಲಾ ಸಾಧ್ಯ ಅಸಾಧ್ಯಗಳ ಮಧ್ಯೆ ನೀ
ಲಭ್ಯವಿರುವ ಸಮಯದ ಇತಿಮಿತಿ ಅರಿತು
ಸಭ್ಯತನ ತೋರಿ ಎಲ್ಲವನ್ನೂ ಗೆಲ್ಲು.
-- ಪುಷ್ಪಥಾರಾ ಉಚಿಲ್
Sunday, March 1, 2009
Key
ಜೋಪಾನ! ಜೋಪಾನ!
ನೀ ಕಾಣೆಯಾದರೆ ನನ್ನ ಪ್ರಾಣ
ಹಾರಿ ಹೂದನ್ತಾಗುವುದು
ಜ್ಞಾನ ಅಜ್ನಾನವಾಗುವುದು
ಇರದು ನನಗೆ ಮತ್ಯಾವ ಚಿಂತೆ
ನೀ ಕೈ ತಪ್ಪಿದರೆ ನಾ ಅಭದ್ರಳಂತೆ
ಎಲ್ಲಿ ನೀ ಸಿಗುವೆಯೋ ಅಲ್ಲಿ ನಾ ರಾಣಿಯಂತೆ
ಈ ಬೀಗದ ಕೈ ಆಟ ಆಡುವವರು ಯಾರು ಗೊತ್ತೇ
ಅವರೇ ಮನುಷ್ಯರು!!!
ನೀ ಕಾಣೆಯಾದರೆ ನನ್ನ ಪ್ರಾಣ
ಹಾರಿ ಹೂದನ್ತಾಗುವುದು
ಜ್ಞಾನ ಅಜ್ನಾನವಾಗುವುದು
ಇರದು ನನಗೆ ಮತ್ಯಾವ ಚಿಂತೆ
ನೀ ಕೈ ತಪ್ಪಿದರೆ ನಾ ಅಭದ್ರಳಂತೆ
ಎಲ್ಲಿ ನೀ ಸಿಗುವೆಯೋ ಅಲ್ಲಿ ನಾ ರಾಣಿಯಂತೆ
ಈ ಬೀಗದ ಕೈ ಆಟ ಆಡುವವರು ಯಾರು ಗೊತ್ತೇ
ಅವರೇ ಮನುಷ್ಯರು!!!
Subscribe to:
Posts (Atom)

